Sunday 29 October 2017

Life is all about

ಆಲೋಚಿಸಿ...
*"ಚಿಂತೆ ಬೇಡವೇ ಬೇಡ"*
ಜಗತ್ತಿನ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಟೈಮ್ ಝೋನ್ ಇದೆ. ಭಾರತದಲ್ಲಿ ಕತ್ತಲು ಕವಿದಿದ್ದರೆ, ಇನ್ಯಾವುದೋ ದೇಶದ ಜನ ಆಗಷ್ಟೇ ಮೈ ಮುರಿದು ಏಳುತ್ತಿರುತ್ತಾರೆ. ಇನ್ನೆಲ್ಲೋ ಮಧ್ಯಾಹ್ನದ ಸುಡು ಬಿಸಿಲು ನೆತ್ತಿ ಸುಡುತ್ತಿರುತ್ತದೆ.  ಕ್ಯಾಲಿಫೋರ್ನಿಯಾಕ್ಕಿಂತಲೂ ನ್ಯೂಯಾರ್ಕ್ ಮೂರು ಗಂಟೆ ಮುಂದಿದೆ. ನ್ಯೂಯಾರ್ಕ್‌ನಲ್ಲಿ ಬೆಳಗ್ಗೆ ಆರು ಗಂಟೆಯಾಗಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಗಂಟೆ ಮೂರಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ನ್ಯೂಯಾರ್ಕ್‌ಗಿಂತ ಕ್ಯಾಾಲಿಫೋರ್ನಿಯಾ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತದೆಯೇ?
ಯಾರೋ ಒಬ್ಬ ಹುಡುಗ 22 ವರ್ಷಕ್ಕೇ ಪದವೀಧರನಾದರೂ ಒಂದು ಒಳ್ಳೆಯ ಕೆಲಸ ಪಡೆಯಲು ಐದು ವರ್ಷ ಕಾಯಬೇಕಾದೀತು. ಆದರೆ ಇನ್ಯಾರೋ ಒಬ್ಬ 25ನೇ ವಯಸ್ಸಿಗೆ ಕಂಪನಿಯ ಸಿಇಒ ಆಗಿ, 50 ವರ್ಷಕ್ಕೇ ಸತ್ತು ಹೋಗಿ ಬಿಡಬಹುದು.

ಇನ್ನೊಬ್ಬ 52ನೇ ವರ್ಷದಲ್ಲಿ ಸಿಇಒ ಆಗಿ 90 ವರ್ಷದವರೆಗೆ ಬದುಕಿದ. ನಿಮ್ಮಲ್ಲಿ ಎಷ್ಟೋ ಮಂದಿ ಇನ್ನೂ ಅವಿವಾಹಿತರಿದ್ದೀರಿ. ಆದರೆ ಕೆಲವರಿಗೆ ಮದುವೆಯಾಗಿ, ಈಗಾಗಲೇ ಮಕ್ಕಳಿವೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 55ನೇ ವರ್ಷದಲ್ಲಿ ನಿವೃತ್ತಿ ಹೊಂದಿದ. ಆದರೆ ಡೊನಾಲ್ಡ್‌ ಟ್ರಂಪ್‌ನ ರಾಜಕೀಯ ಜೀವನ ಆರಂಭವಾಗಿದ್ದೇ 70ನೆ ವರ್ಷದಲ್ಲಿ!

ಎಷ್ಟೊಂದು ವಿಚಿತ್ರ ಅಲ್ಲವೇ ಇದು! ಹೇಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ ಟೈಮ್ ಝೋನ್ (ಸಮಯದಲ್ಲಿ ವ್ಯತ್ಯಾಸ) ಅನ್ನುವುದು ಇದೆಯೋ, ಪ್ರತಿ ಮನುಷ್ಯನೂ ತನ್ನದೇ ಆದ ಟೈಮ್ ಝೋನ್ ಪ್ರಕಾರ ಬದುಕುತ್ತಿದ್ದಾನೆ.  ನಿಮ್ಮ ಸಹಪಾಠಿಯೋ, ಸಹೋದ್ಯೋಗಿಯೋ ಜೀವನದಲ್ಲಿ ನಿಮಗಿಂತ ಮುಂದೆ ಹೋಗುತ್ತಿದ್ದಾನೆಂದು ಅನಿಸುತ್ತದೆ. ಇನ್ನೂ ಕೆಲವರು ನಿಮಗಿಂತ ಹಿಂದೆಯೇ ಇದ್ದಾರೆಂದು ನೀವು ಸಮಾಧಾನ ಪಟ್ಟುಕೊಳ್ಳುತ್ತೀರಿ. ಆದರೆ ಎಲ್ಲರೂ ತಮ್ಮ ತಮ್ಮ ಟೈಮ್ ಝೋನ್ ಪ್ರಕಾರ ತಮ್ಮ ಜೀವನದ ಓಟದಲ್ಲಿದ್ದಾರೆ.
 ಹಾಗಾಗಿ ಯಾರ ಮೇಲೂ ಅಸೂಯೆ ಪಡಬೇಡಿ, ಯಾರನ್ನೂ ಅಪಮಾನಿಸಬೇಡಿ. They are in their TIME ZONE, and you are in yours!
ನಮ್ಮ ನಮ್ಮ ಸಮಯ ಯಾವಾಗ ಬರುತ್ತದೆಂದು ತಾಳ್ಮೆಯಿಂದ ಕಾಯುತ್ತಾ ಕೆಲಸ ಮಾಡುತ್ತಿರುವುದೇ ಜೀವನ. ಚಿಂತೆ ಬೇಡವೇ ಬೇಡ.
ನೀವು ಯಾರಿಗಿಂತಲೂ ಮುಂದೆ ಹೋಗಿಲ್ಲ, ಯಾರಿಗಿಂತಲೂ ಹಿಂದೆ ಬಿದ್ದಿಲ್ಲ. ನೀವು ನಿಮ್ಮ ಕಾಲಚಕ್ರದ ಪ್ರಕಾರ ನಡೆಯುತ್ತಿದ್ದೀರಿ ಅಷ್ಟೇ. ನೀವೆಷ್ಟೇ ನಿಧಾನವಾಗಿ ನಡೆದರೂ, ವೇಗವಾಗಿ ನಡೆದರೂ ಗುರಿ ತಲುಪುವುದು ನಿಮ್ಮ ಟೈಮ್ ಝೋನ್ ಪ್ರಕಾರವೇ!
 ಕಾಲಾಯ ತಸ್ಮೈ ನಮ: 




No comments:

Post a Comment

all time