ಭಾರೀ ಅಂತರದಲ್ಲಿ ಗೆದ್ದ ಸುನೀಲ್ ಜಾಖರ್: ಬಿಜೆಪಿಗೆ ತೀವ್ರ ಮುಖಭಂಗ
ಗುರುದಾಸ್ಪುರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ
ವಾರ್ತಾ ಭಾರತಿ : 15 Oct, 2017
ಚಂಢೀಗಡ, ಅ,15: ಗುರುದಾಸ್ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಸುನೀಲ್ ಜಾಖರ್ 1,93,219 ಮತಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದು, ಬಿಜೆಪಿ ಭಾರೀ ಮುಖಭಂಗಕ್ಕೊಳಗಾಗಿದೆ.
“ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ನಾಯಕತ್ವದ ಮೇಲೆ ಪಂಜಾಬ್ ನ ಜನತೆ ನಂಬಿಕೆಯಿರಿಸಿದ್ದಾರೆ ಎಂದು ಈ ಜಯದಿಂದ ಸಾಬೀತಾಗಿದೆ” ಎಂದು ಸುನೀಲ್ ಜಾಖರ್ ಹೇಳಿದ್ದಾರೆ.
“ಗುರುದಾಸ್ಪುರ ಚುನಾವಣೆಯಲ್ಲಿ ಜಯಗಳಿಸಿದ ಸುನೀಲ್ ಜಾಖರ್ ಅವರಿಗೆ ಅಭಿನಂದನೆಗಳು.. ಇದು ಐಎನ್ ಸಿ ಪಂಜಾಬ್ ಹಾಗು ಅಭಿವೃದ್ಧಿಯ ಅಜೆಂಡಾಗೆ ಸಿಕ್ಕ ಜಯ” ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 11ರಂದು ಗುರುದಾಸ್ಪುರ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.
No comments:
Post a Comment