Wednesday 29 November 2017

A smile and good gestures costs nothing but values much

ದಯವಿಟ್ಟು ಓದಿ 📝

ಅದೊಂದು ಕೈಗಾರಿಕಾ ಪ್ರದೇಶ. ನೂರಾರು ಕಾರಖಾನೆಗಳ ನಡುವೆ ಅದೊಂದು ಫ್ರೀ  ಜರ್ ಘಟಕ.

ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಶೀತಲೀಕರಣ ಯಂತ್ರಗಳು ಅದರ ಮುಖ್ಯ ಭಾಗ.

ಅದೊಂದು ದಿನ ಸಂಜೆ ಎಲ್ಲರೂ ಮನೆಗೆ ಹೊರಡುವ ಸಮಯ ಆಗಿತ್ತು.
ಒಬ್ಬೊಬ್ಬರಾಗಿ, ಗಡಿಯಾರ ನೋಡಿಕೊಂಡು,
ಘಟಕದಿಂದ ಮರಳಿ ಮನೆಯ ಕಡೆ ಪ್ರಯಾಣ ಬೆಳೆಸಲು ಆರಂಭಿಸಿದ್ದರು.

ಆದರೆ ಆ ಘಟಕದ ಎಲೆಕ್ಟ್ರಾನಿಕ್ಸ್ ವಿಭಾಗದ ಇಂಜಿನಿಯರ್ ಒಬ್ಬರು ಎಲ್ಲಾ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ನೋಡಿಕೊಂಡು ಬರುತ್ತಿರುವಾಗ,
ಯಾವುದೋ ಫ್ರೀಜರಿನಲ್ಲಿ ಸಮಸ್ಯೆ ಇರುವುದು ಗೊತ್ತಾಯಿತು.

ಒಂದು ಗೋಡೌನ್‌ನಷ್ಟು ಗಾತ್ರವಿದ್ದ,
ಆ ಫ್ರೀಜರಿನಲ್ಲಿರುವ ಸಮಸ್ಯೆಯನ್ನು ಗುರುತಿಸಲು ಆತನಿಗೆ ಸಮಯ ಸಾಲದಾಯಿತು.

ಅದರ ಒಳಗೆ ಸಮಸ್ಯೆಯನ್ನು ಬಗೆ ಹರಿಸಿ, ,ಹೊರಗೆ ಬರಲು ನೋಡಿದರೆ ಮನೆಗೆ ಹೋಗುವ ಆತುರದಲ್ಲಿ ,,

ಯಾರೋ ಒಬ್ಬ,

ಎಲ್ಲರೂ ಹೊರಗೆ ಬಂದಿದ್ದಾರೆ ಎಂದು ನೋಡದೆ ,,,,,

ಹೊರಗಿನಿಂದ ಬಾಗಿಲು ಹಾಕಿ ಬಿಟ್ಟಿದ್ದನು.

ಒಳಗಿದ್ದ ಇಂಜಿನಿಯರ್ ಕಿರುಚುತ್ತಾ ಯಾರಾದರೂ ಸಹಾಯ ಮಾಡುತ್ತಾರಾ ಎಂದು ಕರೆದನು.

ಆದರೆ ಅವನಿಗೆ ಪ್ರತಿಕ್ರಿಯಿಸುವವರು ಯಾರೂ ಇರಲಿಲ್ಲ. .

ಸಾಲದ್ದಕ್ಕೆ ಘಟಕದ ಒಳಭಾಗದ ದೀಪಗಳೆಲ್ಲ ಆರಿಸಲ್ಪಟ್ಟಿದ್ದವು.

ಮೈನಸ್ ಉಷ್ಣಾಂಶವಿದ್ದ ಆ ಫ್ರೀಜರ್ ಘಟಕ ಆತನಿಗೆ ಮಂಜುಗಡ್ಡೆಯ ಸಮಾಧಿಯಂತೆ ಕಾಣಿಸಲಾರಂಭಿಸಿತು.

ಅವನು ಧರಿಸಿದ್ದ ಬೆಚ್ಚನೆಯ ಉಡುಪು ಸಹ ಚಳಿಯನ್ನು ತಡೆಯಲು ಅಸಾಧ್ಯ ಎನ್ನುವಂಥ ಸ್ಥಿತಿ ತಲುಪಿತು.

ಹೀಗೆ ಸಮಯ  ಕಳೆಯುತ್ತ ಹೋಯಿತು. ಇವನ ಕೈ ಕಾಲು ಮರಗಟ್ಟಲು ಆರಂಭಿಸಿತು.

ಅಷ್ಟರಲ್ಲಿ ಯಾರೋ ಬಾಗಿಲು ತೆರೆಯುತ್ತಿರುವುದು ಕಾಣಿಸಿತು.

ಆ ಘಟಕದ ಸೆಕ್ಯೂರಿಟಿ ಗಾರ್ಡ್

ಟಾರ್ಚ್ ಹಿಡಿದುಕೊಂಡು ಯಾರನ್ನೋ ಹುಡುಕುತ್ತಾ ಬಂದಂತೆ ಕಂಡನು.

ಅವನನ್ನು ಕರೆದಾಗ ಓಡಿ ಬಂದು, ಬಾಗಿಲು ತೆರೆದನು.

ಓಡಿ ಹೋಗಿ

ತಾನು ರಾತ್ರಿಗೆಂದು

ಫಾಸ್ಕ್‌ನಲ್ಲಿ ತುಂಬಿ ತಂದಿದ್ದ
ಬಿಸಿ ಬಿಸಿ ಚಹವನ್ನು
ಸುರಿದು ಕೊಟ್ಟನು.

ಬದುಕಿದೆಯಾ ಬಡಜೀವವೇ,

ಎಂಬಂತಾಗಿದ್ದ ಇವನು ಆ ಚಹವನ್ನು ಕುಡಿದು ಚೇತರಿಸಿಕೊಂಡನು

ಹಾಗೂ ಕುತೂಹಲದಿಂದ ಆ ಗಾರ್ಡನನ್ನು ಕೇಳಿದನು.

"ನಾನು ಒಳಗೆ ಸಿಕ್ಕಿ ಹಾಕಿಕೊಂಡಿದ್ದೆ ಎಂದು ನಿನಗೆ ಹೇಗೆ ಗೊತ್ತಾಯಿತು?

ಯಾರು ನಿನಗೆ ತಿಳಿಸಿದರು? "

ಎಂದು ಕೇಳಿದನು.

ಅದಕ್ಕೆ ಆ ಗಾರ್ಡ್ ಹೇಳಿದನು "

ಯಾರೂ ಹೇಳಲಿಲ್ಲ ಸರ್, ಈ ಪ್ಲಾಂಟ್‌ನಲ್ಲಿ
ಸುಮಾರು ೫೦ ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ,

ಆದರೆ ಬೆಳಗ್ಗೆಯಾದರೆ ಒಂದು ಹಾಯ್, ಸಂಜೆಯಾದರೆ ಬಾಯ್, ಎಂದು ಹೇಳಿ ಹೋಗುವುದು ಮಾತ್ರ ನೀವೊಬ್ಬರೇ!

ನಾನು ನಿಮಗೆ ನಮಸ್ಕಾರ ಹೇಳುವ ಮೊದಲೇ ನೀವು

ಮೇಲಧಿಕಾರಿ ಎಂಬ ಭಾವನೆಯನ್ನೂ ತೋರದೆ

ನೀವಾಗಿಯೇ ನನ್ನ ಕಡೆ ನೋಡಿ ನಗುತ್ತಾ ಕೈಬೀಸಿ ಹಾಯ್ ಹೇಳುತ್ತೀರಿ

ಹಾಗೂ
ಸಂಜೆ ಮನೆಗೆ ಹೋಗುವಾಗಲೂ ಅದೇ

ನಗುಮುಖದಿಂದ ಬಾಯ್
ಹೇಳಿ ಹೋಗುತ್ತಿರುವ.

ನಾನು ಬೆಳಗ್ಗೆಯಿಂದ ಗೇಟಿನಲ್ಲೇ ಇದ್ದೆ,

ಬೆಳಗ್ಗೆ ನೀವು ಒಳಗೆ ಬಂದವರು ಹೊರಗೆ ಬರಲಿಲ್ಲ,
ಅದಕ್ಕೆ

ಸಂಶಯ ಬಂದು ನಿಮ್ಮನ್ನೇ ಹುಡುಕಿಕೊಂಡು ಬಂದೆ ಎಂದನು.

ಇದನ್ನು ಕೇಳಿದ ಆ ನೌಕರ ಆ ಗಾರ್ಡನನ್ನು ಬಾಚಿ ತಬ್ಬಿಕೊಂಡ.

ಹೇಳಲು ಅವನ ಬಳಿ ಪದಗಳೇ ಇರಲಿಲ್ಲ.

ಕೇಳಲು ಆ ಗಾರ್ಡ್‌ಗೆ ಯಾವ ಪ್ರಶ್ನೆಗಳೇ ಇರಲಿಲ್ಲ.

ಒಮ್ಮೆ ಆಲೋಚಿಸಿ. ಒಬ್ಬ ಮನುಷ್ಯನಿಗೆ ಆ ನೌಕರ ತೋರಿದ ಒಂದು ಸಣ್ಣ ಗೌರವ ಪೂರ್ವಕ ನಡವಳಿಕೆ ಆತನ ಜೀವವನ್ನು ಉಳಿಸಿತು.
ಹಾಗಾಗಿ ಯಾರನ್ನಾದರು ಭೇಟಿಯಾದಾಗ ಅವರಿಗೆ ಒಂದು ನಮಸ್ಕಾರ ಹೇಳಿ.

ಕನಿಷ್ಠ ಪಕ್ಷ ಅವರಿಗೆ ಗೌರವ ಪೂರ್ವಕವಾಗಿ ನಗುತ್ತ ಮಾತನಾಡಿಸಿ. ಈ ಸಮಯದಲ್ಲಿ ಒಂದು ಮುಗುಳ್ನಗೆ ನಿಮ್ಮ ಮುಖದಲ್ಲಿರಬೇಕೆಂಬುದನ್ನು ಮರೆಯಬೇಡಿ. ಇಂತಹ ಉತ್ತಮ ಶಿಷ್ಠಾಚಾರಗಳನ್ನು ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡುವುದನ್ನು ಮತ್ತು ನೀವೂ ಪಾಲಿಸಲು ಮರೆಯಬೇಡಿ. ಇದರಿಂದ ನಮಗೆ ಒಳ್ಳೆಯದೇ ಆಗುತ್ತದೆಯೇ ಹೊರತು ನಷ್ಟ ಎಂದಿಗೂ ಆಗದು! ಯಾರು ಬಲ್ಲರು?, ನಮ್ಮ ಈ ಒಂದು ಸಣ್ಣ ನಡವಳಿಕೆಯು ನಮ್ಮ ಜೀವನದಲ್ಲಿ ಪವಾಡವನ್ನೇ ಮಾಡಬಹುದು! ಅಲ್ಲವೇ?  *You earn Respect if u learn to Respect Others*

ಬದುಕಿಗೊಂದು ಪಾಠ... ಓದಿದ್ದನ್ನ ಹಂಚಿಕೊಂಡಿದ್ದಿನಿ.

No comments:

Post a Comment

all time